ಈತನು ದೇವರ ಮಹಿಮೆಯ ಪ್ರಕಾಶವೂ ಆತನ ವ್ಯಕ್ತಿತ್ವದ ಪ್ರತಿರೂಪವೂ ತನ್ನ ಬಲವುಳ್ಳ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದು ತಾನೇ ನಮ್ಮ ಪಾಪಗಳನ್ನು ತೊಳೆದ ಮೇಲೆ ಉನ್ನತದೊಳಗೆ ಮಹೋನ್ನತನ ಬಲ ಗಡೆಯಲ್ಲಿ ಕೂತುಕೊಂಡನು.
ಹೇಗೆಂದರೆ--ನೀನು ನನ್ನ ಮಗನು; ನಾನೇ ಈ ಹೊತ್ತು ನಿನ್ನನ್ನು ಪಡೆದಿದ್ದೇನೆ ಎಂತಲೂ ತಿರಿಗಿ--ನಾನು ಅವನಿಗೆ ತಂದೆಯಾಗಿ ರುವೆನು; ಅವನು ನನಗೆ ಮಗನಾಗಿರುವನು ಎಂತಲೂ ಆತನು ತನ್ನ ದೂತರೊಳಗೆ ಯಾರಿಗಾದರೂ ಎಂದಾ ದರೂ ಹೇಳಿದ್ದುಂಟೋ?
ನೀನು ನೀತಿಯನ್ನು ಪ್ರೀತಿಸಿದ್ದೀ, ದುಷ್ಠತನವನ್ನು ದ್ವೇಷಿಸಿದ್ದೀ; ಆದದರಿಂದ ದೇವರು, ನಿನ್ನ ದೇವರೇ, ನಿನ್ನನ್ನು ನಿನ್ನ ಜೊತೆಗಾರರಿಗಿಂತ ಮಿಗಿಲಾಗಿ ಆನಂದದ ತೈಲದಿಂದ ಅಭಿಷೇಕಿಸಿದ್ದಾನೆಂತಲೂ